ರಾವ್, ಸಿ ಎನ್ ಆರ್  1934-. ಅಂತರರಾಷ್ಟ್ರೀಯ ಖ್ಯಾತಿಗಳಿಸಿರುವ ಭಾರತೀಯ ರಸಾಯನ ವಿe್ಞÁನಿ. ಪೂರ್ಣ ಹೆಸರು ಚಿಂತಾಮಣಿ ನಾಗೇಶ ರಾಮಚಂದ್ರರಾವ್. ಜನನ ಬೆಂಗಳೂರಿನಲ್ಲಿ, 1934 ಜೂನ್ 30 ರಂದು. ತಂದೆ ನಾಗೇಶರಾವ್. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಇವರ ಪದವಿವ್ಯಾಸಂಗ ನಡೆಯಿತು. ಮುಂದೆ ರಸಾಯನ ವಿe್ಞÁನದಲ್ಲಿ ಸ್ನಾತಕೋತ್ತರ ಪದವಿಯನ್ನು (ಎಂ.ಎಸ್‍ಸಿ) ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಅನಂತರ ಅಮೆರಿಕ ಸಂಯುಕ್ತ ಸಂಸ್ಥಾನದ ಇಂಡಿಯಾನ ರಾಜ್ಯದ ಪಡ್ರ್ಯೂ ವಿಶ್ವವಿದ್ಯಾಲಯದಿಂದ ಡಾಕ್ಟೊರೇಟ್ (ಪಿ.ಎಚ್.ಡಿ) ಪದವಿ ಗಳಿಸಿದರು. (1958). ಇದಾದ ಬಳಿಕ ಸ್ವದೇಶಕ್ಕೆ ಹಿಂತಿರುಗಿದ ರಾವ್ ಅವರಿಗೆ 1960ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಡಾಕ್ಟರ್ ಆಫ್ ಸೈನ್ಸ್ (ಡಿ.ಎಸ್‍ಸಿ.) ಪದವಿಯನ್ನು ನೀಡಿತು. ಇವರು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದಲ್ಲದೇ ಕಾನ್ಪುರದ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಒಂದು ದಶಕಕ್ಕೂ ಹೆಚ್ಚುಕಾಲ ರಸಾಯನ ವಿe್ಞÁನ ವಿಭಾಗದ ಮುಖ್ಯಸ್ಥರಾಗಿಯೂ ಸೇವೆಸಲ್ಲಿಸಿದ್ದಾರೆ. 1976ರಲ್ಲಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಸಂಸ್ಥೆಯಲ್ಲಿ ನೂತನವಾಗಿ ಪ್ರಾರಂಭಿಸಿದ ಘನಸ್ಥಿತಿ ರಸಾಯನ ವಿe್ಞÁನ ವಿಭಾಗದ ಮುಖ್ಯಸ್ಥರಾಗಿದ್ದುಕೊಂಡು ರೋಹಿತವಿe್ಞÁನದ ಬಗ್ಗೆ ವಿಶೇಷ ಸಂಶೋಧನೆ ಕೈಗೊಂಡರು. ಈ ವೇಳೆಯಲ್ಲಿ ಇವರು ಘನಸ್ಥಿತಿ ರಸಾಯನ ವಿe್ಞÁನ ಘಟಕ ಮತ್ತು ಪದಾರ್ಥ ಸಂಶೋಧನಾ ಪ್ರಯೋಗಶಾಲೆಗಳನ್ನು ಸಂಸ್ಥೆಯಲ್ಲಿ ಸ್ಥಾಪಿಸಿದರು. ಅನಂತರ 1984ರಿಂದ ಒಂದು ದಶಕದ ತನಕ ಆ ಸಂಸ್ಥೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದರು.

ಇವರ ವಿದ್ವತ್ತು ಹಾಗೂ ಸಾಧನೆಗಳನ್ನು ಗಮನಿಸಿದ ಇಂಗ್ಲೆಂಡ್‍ನ ಪ್ರತಿಷ್ಠಿತ ರಾಯಲ್ ಸೊಸೈಟಿ ಇವರನ್ನು ತನ್ನ ಸದಸ್ಯರನ್ನಾಗಿ ಸ್ವೀಕರಿಸಿತು. 1982ರಲ್ಲಿ ಇದರ ಫೆಲೋ ಆದರು. ಅಮೆರಿಕ, ರಷ್ಯ ಹಾಗೂ ಯುರೋಪಿನ ಅನೇಕ ದೇಶಗಳ ಸುಮಾರು ಇಪ್ಪತ್ತೆರಡು ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟೊರೇಟ್ ಪ್ರಶಸ್ತಿ ನೀಡಿ ಸನ್ಮಾನಿಸಿವೆ. ರಾವ್ ಅವರು ಕೆಲವು ಮುಂದುವರೆದ ದೇಶಗಳ ವಿe್ಞÁನ ಹಾಗೂ ಕಲಾ ಅಕೆಡಮಿಗಳ ಸದಸ್ಯರೂ ಆಗಿದ್ದಾರೆ. ತೃತೀಯ ಪ್ರಪಂಚದ (ಥರ್ಡ್ ವಲ್ರ್ಡ್) ವಿe್ಞÁನಗಳ ಅಕೆಡಮಿಯನ್ನೂ ಸ್ಥಾಪಿಸಿ ರಾಯರು ಅದರ ಫೆಲೋ ಸಹ ಆಗಿದ್ದಾರೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವೈe್ಞÁನಿಕ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ ಸಂಘಸಂಸ್ಥೆಗಳ ಸ್ಥಾಪನೆಯ ಪ್ರಾಮುಖ್ಯದ ಬಗ್ಗೆ ಇವರಿಗೆ ಹೆಚ್ಚಿನ ಕಾಳಜಿ ಇದೆ. 
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾವ್ ಅವರಿಗೆ ಅನೇಕ ಗೌರವ ಹಾಗೂ ಪ್ರಶಸ್ತಿಗಳು ಸಂದಿವೆ. ಇವುಗಳ ಪೈಕಿ ಭಾರತ ಸರ್ಕಾರದಿಂದ ಸಂದ ಪದ್ಮಶ್ರೀ (1974) ಹಾಗೂ ಪದ್ಮವಿಭೂಷಣ ಪ್ರಶಸ್ತಿಗಳು (1985). ವಿಶ್ವವಿದ್ಯಾಲಯದ ಅನುದಾನ ಆಯೋಗ ನೀಡುವ ಸರ್ ಸಿ. ವಿ. ರಾಮನ್ ಪ್ರಶಸ್ತಿ (1975), ಭಾರತದ ರಾಷ್ಟ್ರೀಯ ವಿe್ಞÁನ ಅಕೆಡಮಿ ನೀಡಿದ ಮೇಘನಾದ ಸಹಾ ಪದಕ (1990)- ಇವು ಪ್ರಮುಖವಾದವು. ಇಂಗ್ಲೆಂಡಿನ ಫ್ಯಾರಡೆ ಸೊಸೈಟಿ ನೀಡಿರುವ ಮಾರ್ಲೋ ಪದಕ (1967). ರಾಯಲ್ ರಾಸಾಯನಿಕ ಸಂಸ್ಥೆಯ ಪದಕ (1981). ಯುನೆಸ್ಕೊದ ಐನ್‍ಸ್ಟೈನ್ ಸ್ವರ್ಣ ಪದಕ (1996)- ಇವೆಲ್ಲ ಇವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವವನ್ನು ತಂದುಕೊಟ್ಟಿವೆ ಇಷ್ಟೇ ಅಲ್ಲದೇ ಇವರು ಅನೇಕ ವಿದೇಶಿ ವೈe್ಞÁನಿಕ ಸಂಘ ಸಂಸ್ಥೆಗಳ ಫೆಲೋಷಿಪ್‍ಗಳನ್ನೂ ಪಡೆದುಕೊಂಡಿದ್ದಾರೆ.
ರಾವ್ ಅವರು ಶುದ್ಧ ಹಾಗೂ ಅನ್ವಯಿಕ ರಾಸಾಯನವಿe್ಞÁನ ಅಂತಾರಾಷ್ಟ್ರೀಯ ಸಂಘದ (ಐ.ಯು.ಎ.ಸಿ.) ಅಧ್ಯಕ್ಷತೆಯನ್ನೂ 1985-87ರ ಅವಧಿಯಲ್ಲಿ ವಹಿಸಿದ್ದರು. ಭಾರತೀಯ ರಾಷ್ಟ್ರೀಯ ವಿe್ಞÁನ ಅಕೆಡಮಿಯ ಅಧ್ಯಕ್ಷತೆಯನ್ನು 1985ರಿಂದ 86ರ ತನಕ, ಭಾರತದ ವಿe್ಞÁನಗಳ ಅಕೆಡಮಿಯ ಅಧ್ಯಕ್ಷತೆಯನ್ನು 1989ರಿಂದ 91ರ ತನಕ ಮತ್ತು ಭಾರತದ ವಿe್ಞÁನ ಕಾಂಗ್ರೆಸ್ ಸಂಘದ ಅಧ್ಯಕ್ಷತೆಯನ್ನು 1987ರಿಂದ 88ರ ತನಕ ವಹಿಸಿದ್ದರು. ಇಂದಿಗೂ ಇವರು ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವೈe್ಞÁನಿಕ ಸಂಘಸಂಸ್ಥೆಗಳ ಸದಸ್ಯರಾಗಿ ಮುಂದುವರೆದಿದ್ದಾರೆ.

ತಮ್ಮ ಸಂಶೋಧನೆಯೊಂದಿಗೇ ರಾವ್ ಅವರು ಸುಮಾರು ಮೂವತ್ತು ಪುಸ್ತಕಗಳನ್ನು ಸ್ವತಃ ತಾವೇ ಅಥವಾ ಇತರರೊಂದಿಗೂಡಿ ರಚಿಸಿದ್ದಾರೆ. ಸಂಪಾದಿತ ಕೃತಿಗಳೂ ಇವೆ. ಸುಮಾರು ಎಂಟುನೂರು ಸಂಶೋಧನಾ ಪ್ರಬಂಧಗಳನ್ನು ಸ್ವತಃ ತಾವೇ ಅಲ್ಲದೇ ಇತರರ ಸಹಯೋಗದಿಂದ ಪ್ರಕಟಿಸಿದ್ದಾರೆ. ಸುಮಾರು ಹದಿನೈದು ವೈe್ಞÁನಿಕ ನಿಯತಕಾಲಿಕೆಗಳ ಸಂಪಾದಕ ಸಮಿತಿಗಳಲ್ಲೂ ಇವರು ಸೇವೆ ಸಲ್ಲಿಸುತ್ತಿದ್ದಾರೆ.

ರಾವ್ ಅವರು ಅಲ್ಬರ್ಟ್ ಐನ್‍ಸ್ಟೈನ್ ಸಂಶೋಧನ ಪ್ರಾಧ್ಯಾಪಕರೂ ಹಾಗೂ ಬೆಂಗಳೂರಿನಲ್ಲಿರುವ ಜವಹರಲಾಲ್ ನೆಹರು ಅಡ್ವಾನ್ಸ್‍ಡ್ ಸೈಂಟಿಫಿಕ್ ರಿಸರ್ಚ್ ಸೆಂಟರ್ ಕೇಂದ್ರದ ಮುಖ್ಯಸ್ಥರೂ ಆಗಿದ್ದಾರೆ. ಇದರೊಂದಿಗೆ ಇವರು ಅಮೆರಿಕದ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯಕ್ಕೆ ಆಗಿಂದಾಗ್ಗೆ ಭೇಟಿ ನೀಡುವ ಗೌರವಾನ್ವಿತ ಪ್ರಾಧ್ಯಾಪಕರೂ ಆಗಿದ್ದಾರೆ. ಇವಲ್ಲದೇ ಭಾರತದ ಕೇಂದ್ರ ಸರ್ಕಾರದ ಕ್ಯಾಬಿನೆಟ್‍ನ ವೈe್ಞÁನಿಕ ಸಲಹಾ ಸಮಿತಿಯ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ರೋಹಿತ ವಿe್ಞÁನ ಹಾಗೂ ರಸಾಯನವಿe್ಞÁನ ಕ್ಷೇತ್ರದಲ್ಲಿ, ಅದರಲ್ಲೂ ಪದಾರ್ಥಗಳ ರಾಸಾಯನಿಕ ಸಂಯೋಜನೆ ಹಾಗೂ ರಚನೆಗಳನ್ನು ಅರಿಯುವಲ್ಲಿ ರೋಹಿತವಿe್ಞÁನವನ್ನು ಅನ್ವಯಿಸುವ ವಿಧಾನಗಳನ್ನು ಕುರಿತಂತೆ ಹಾಗೂ ಅಣುಗಳು ಪರಸ್ಪರವಾಗಿ ವರ್ತಿಸುವ ವಿಚಾರದಲ್ಲೂ ರಾಯರು ಸಂಶೋಧನೆಗಳನ್ನು ನಡೆಸಿದ್ದಾರೆ. 1980ರ ದಶಕದ ಮಧ್ಯಭಾಗದಲ್ಲಿ ಪ್ರಪಂಚಾದ್ಯಂತ ಕುತೂಹಲವನ್ನು ಕೆರಳಿಸಿದ ಅತಿವಾಹಕತೆ (ಸೂಪರ್ ಕಂಡಕ್ಟಿವಿಟಿ) ವಿಷಯದಲ್ಲೂ ಆಸಕ್ತಿಯನ್ನು ತಳೆದ ರಾವ್ ಅವರು ಆ ನಿಟ್ಟಿನಲ್ಲಿ ನಡೆದ ಸಂಶೋಧನೆಗಳಲ್ಲೂ ಭಾಗವಹಿಸಿ ಕಿರಿಯ ವಿe್ಞÁನಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.

ರಾವ್ ಅವರಿಗೆ ಶಾಸ್ತ್ರೀಯ ಸಂಗೀತ ಮತ್ತು ನಾಟಕಗಳಲ್ಲಿ ಆಸಕ್ತಿ ಇದೆ.    

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
			 
  (ಬಿ.ಆರ್.ಜಿ.ಪಿ.)